ಟೆಂಪ್ಲೇಟು: ಬೋರಿಕ್ ಆಮ್ಲ ಬೋರಾನ್, ಆಮ್ಲಜನಕ ಮತ್ತು ಜಲಜನಕದ ಒಂದು ಸಂಯುಕ್ತ. ಇದರ ಅಣುಸೂತ್ರ H3BO3. ಔಷಧಿ ತಯಾರಿಕಾಗಾರರು ಇದನ್ನು ಬೊರಾಸಿಕ್ ಆಮ್ಲವೆಂದು ಕರೆಯುವರು. ಇದು ಸಾಮಾನ್ಯವಾಗಿ ಬಣ್ಣರಹಿತ ಹರಳುಗಳು ಅಥವಾ ಬಿಳಿ ಪುಡಿಯ ರೂಪದಲ್ಲಿ ಸಿಗುತ್ತದೆ. ಇದು ಪ್ರಕೃತಿಯಲ್ಲಿ ಸ್ಯಾಸೊಲೈಟ್ ಖನಿಜವಾಗಿ ಸಿಗುತ್ತದೆ. ಇದು ಒಂದು ದುರ್ಬಲ ಆಮ್ಲ. == ದೊರಕುವಿಕೆ == ಭಾರತದಲ್ಲಿ ಬೋರಾಕ್ಸ್ ನಿಕ್ಷೇಪಗಳು ಕಾಶ್ಮೀರದ ಪೂಗಾ ಕಣಿವೆಯ ವಲಯದಲ್ಲಿ, ರಾಜಾಸ್ಥಾನದಲ್ಲಿ ಇರುವುದು ವರದಿಯಾಗಿದೆ. == ತಯಾರಿಕೆ == ಈ ಆಮ್ಲವನ್ನು ೧೭೦೨ರಲ್ಲಿ ಮೊದಲ ಬಾರಿಗೆ ತಯಾರಿಸಲು ಉಪಯೋಗಿಸಿದ ವಿಧಾನವೇ ಇಂದೂ ಕೈಗಾರಿಕೆಯಲ್ಲಿ ಆಚರಣೆಯಲ್ಲಿದೆ. ಪ್ರಕೃತಿಯಲ್ಲಿ ದೊರಕುವ ಬೋರಾಕ್ಸ್ ಲವಣದ ದ್ರಾವಣವೊಂದಕ್ಕೆ ಸಲ್ಫ್ಯೂರಿಕ್ ಆಮ್ಲವನ್ನು ಮಿಶ್ರಿತ ದ್ರಾವಣ ಆಮ್ಲಕ್ರಿಯೆ ತೋರಿಸುವವರೆಗೂ ಹಾಕುವರು. ಅನಂತರ ಫಲಿತ ದ್ರಾವಣವನ್ನು ತಂಪಾಗುವಂತೆ ಮಾಡಿದರೆ ಬಿಳಿಯ ಬೋರಿಕ್ ಆಮ್ಲದ ಹರಳುಗಳು ಹೊರಬೀಳುವುವು. ಅವುಗಳನ್ನು ಶೋಧಿಸಿ ಪ್ರತ್ಯೇಕಿಸಿದ ಅನಂತರ ಉಳಿದ ತಿಳಿ ದ್ರಾವಣವನ್ನು ಕಾಯಿಸಿ ನೀರನ್ನು ಆವಿಯಾಗಿಸಿದರೆ ಸೋಡಿಯಂ ಸಲ್ಫೇಟ್ ಲವಣವೂ ದೊರೆಯುವುದು. Na2B4O7 + H2SO4 + 5H2O → 4H3BO3 + NaSO4 ಸಲ್ಫ್ಯೂರಿಕ್ ಆಮ್ಲದ ಬದಲು ಹೈಡ್ರೊಕ್ಲೋರಿಕ್ ಆಮ್ಲವನ್ನೂ ಉಪಯೋಗಿಸಬಹುದು. == ಉಪಯೋಗಗಳು == ಕೈಗಾರಿಕ ಉಪಯೋಗಗಳು: ಬೋರಿಕ್ ಆಮ್ಲದ ಮುಖ್ಯ ಉಪಯೋಗವೆಂದರೆ ಏಕತಂತು ನಾರುಗಾಜಿನ ತಯಾರಿಕೆ. ಏಕತಂತು ನಾರುಗಾಜನ್ನು ಪ್ಲಾಸ್ಟಿಕ್‍ಗಳನ್ನು ಬಲಪಡಿಸಲು ಉಪಯೋಗಿಸಲಾಗುತ್ತದೆ. ಈ ಬಲಪಡಿಸಿದ ಪ್ಲಾಸ್ಟಿಕ್‍ಗೆ ದೋಣಿಗಳಲ್ಲಿ, ಕೈಗಾರಿಕಾ ಪೈಪ್‍ಗಳಲ್ಲಿ, ಕಂಪ್ಯೂಟರ್ ಸರ್ಕಿಟ್ ಬೋರ್ಡ್‌ಗಳಲ್ಲಿ ಬಳಕೆಯಿದೆ. ವಿದ್ಯುಲ್ಲೇಪನದಲ್ಲಿ ಬೋರಿಕ್ ಆಮ್ಲವನ್ನು ಬಳಸಲಾಗುತ್ತದೆ. ಬೋರಿಕ್ ಆಮ್ಲ ಮತ್ತು ಬೋರ್‍ಯಾಕ್ಸ್‌ನ ದ್ರಾವಣವನ್ನು ಕಟ್ಟಿಗೆಯಲ್ಲಿ ತುಂಬಿ ಅಗ್ನಿಶಾಮಕ ಪದಾರ್ಥವಾಗಿ ಬಳಸಲಾಗುತ್ತದೆ. ಬೋರ್‍ಯಾಕ್ಸ್‌ಗೆ ಬೋರಿಕ್ ಆಮ್ಲವನ್ನು ಸೇರಿಸಿ ಕಮ್ಮಾರರು ಬೆಸುಗೆ ಬೆರಕೆಯಾಗಿ ಬಳಸಲಾಗುತ್ತದೆ. ವೈದ್ಯಕೀಯ: ಬೋರಿಕ್ ಆಮ್ಲವನ್ನು ಸುಟ್ಟಗಾಯಗಳಿಗೆ, ಇತರೆ ಗಾಯಗಳಿಗೆ ನಂಜುನಿರೋಧಕವಾಗಿ ಬಳಸುತ್ತಾರೆ. ಬೋರಿಕ್ ಆಮ್ಲವನ್ನು ಮೊಡವೆ ಚಿಕಿತ್ಸೆಗೂ ಬಳಸಬಹುದು. ಕೀಟನಾಶಕ: ಬೋರಿಕ್ ಆಮ್ಲವನ್ನು ಜಿರಲೆ, ಗೆದ್ದಲು, ಬೆಳ್ಳಿ ಮೀನನ್ನು ನಿಯಂತ್ರಿಸಲು ಕೀಟನಾಶಕವಾಗಿ ಬಳಸಲಾಗುತ್ತದೆ. ಚಲನ ಸುಲಭಗೊಳಿಸುವ ಪದಾರ್ಥ: ಕೇರಮ್ ಮತ್ತು ನೋವಸ್ ಹಲಗೆಗಳ ಮೇಲೆ ಚಲನೆಯನ್ನು ಸರಾಗವಾಗಿಸಲು ಬೋರಿಕ್ ಆಮ್ಲವನ್ನು ಬಳಸಲಾಗುತ್ತದೆ. ಬೈಜಿಕ ವಿದ್ಯುತ್ತು: ಕೆಲವು ಬೈಜಿಕ ವಿದ್ಯುತ್ ಸ್ಥಾವರಗಳಲ್ಲಿ ನ್ಯೂಟ್ರಾನ್ ವಿಷವಾಗಿ ಬೋರಿಕ್ ಆಮ್ಲವನ್ನು ಬಳಸುತ್ತಾರೆ. ಬೋರಿಕ್ ಆಮ್ಲದಲ್ಲಿನ ಬೋರಾನ್ ಕೆಲವು ಥರ್ಮಲ್ ನ್ಯೂಟ್ರಾನ್‍ಗಳನ್ನು ಹೀರಿ ಉಷ್ಣ ವಿದಳನದ ಸಂಭಾವ್ಯತೆಯನ್ನು ಕಡಿಮೆಮಾಡುತ್ತದೆ. ಕೃಷಿ: ಸಸ್ಯಗಳಲ್ಲಿ ಬೋರಾನ್ ಕೊರತೆಯನ್ನು ತಡೆಯಲು ಬೋರಿಕ್ ಆಮ್ಲವನ್ನು ಬಳಸುತ್ತಾರೆ. ಅಕ್ಕಿ ಮತ್ತು ಗೋಧಿಯಂತಹ ಧಾನ್ಯಗಳ ಸಂರಕ್ಷಣೆಯಲ್ಲಿ ಬಳಸಲಾಗುತ್ತದೆ. == ಉಲ್ಲೇಖಗಳು == == ಹೊರಗಿನ ಕೊಂಡಿಗಳು == - - 0991 - ChemicalLand21 ()" " - . 22 2010 :